||ಶ್ರೀ ಗುರುಭ್ಯೋ ನಮಃ || ಶ್ರೀ ಕಾಳಿಕಾ೦ಬಾ ವಿನಾಯಕಾಭ್ಯಾo ನಮಃ || ಓಂ ನಮೋ ವಿಶ್ವಕರ್ಮಣೇ ||

SHREE KALIKAMBA VINAYAKA TEMPLE, Mangalore

ಶ್ರೀ ಕಾಳಿಕಾ೦ಬಾ ವಿನಾಯಕ ದೇವಸ್ಥಾನ, ಮ೦ಗಳೂರು

ಜೀರ್ಣೋದ್ಧಾರ ಸಮಿತಿ

         ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯಗಳನ್ನು ನಿರ್ವಹಿಸಲು ಜೀರ್ಣೋದ್ಧಾರ ಸಮಿತಿಯ ರಚನೆಯಾಗಿದ್ದು ನವೀಕರಣ ಕೆಲಸಗಳನ್ನು ಈ ಸಮಿತಿಯು ಸಮಾಜದ ಬಾ೦ಧವರೊಡಗೂಡಿ ನಿರ್ವಹಿಸುತ್ತದೆ. ಶ್ರೀ ಕಾಳಿಕಾ೦ಬಾ ವಿನಾಯಕ ದೇವಸ್ಥಾನವು ಬಹಳ ಪುರಾತನವಾಗಿದ್ದು ಹಲವಾರು ನವೀಕರಣ ,ಬ್ರಹ್ಮಕಲಶೋತ್ಸವಗಳನ್ನು ಕ೦ಡಿದೆ. ಪ್ರಸ್ತುತ ಜೀರ್ಣೋದ್ಧಾರ ಸಮಿತಿಯು ತಾ 23-12-2012 ರಚನೆಗೊ೦ಡಿದ್ದು ಈ ಕೆಳಗಿನ ಪದಾಧಿಕಾರಿಗಳು ಆಯ್ಕೆಗೊ೦ಡಿರುವರು. ಇದಲ್ಲದೆ ಕಾರ್ಯಾಕಾರಿ ಸಮಿತಿ ಹಾಗೂ ಸದಸ್ಯರ ಆಯ್ಕೆಯೂ ನಡೆದಿದೆ.

ಗೌರವಾಧ್ಯಕ್ಷರು ಶ್ರೀ ಪಿ ಶಿವರಾಮ ಆಚಾರ್ಯ

ಕಾರ್ಯಾಧ್ಯಕ್ಷರು ಶ್ರೀ ಕೈ೦ತಿಲ ಸದಾಶಿವ ಆಚಾರ್ಯ

ಉಪಾಧ್ಯಕ್ಷಕರು ಶ್ರೀ ಪಯ್ಯಾಲ್ ಭಾಸ್ಕರ ಆಚಾರ್ಯ
ಕೈಕoಬ ಗಣೇಶ್ ಆಚಾರ್ಯ,
ಎo. ಭಾವನಿಶoಕರ ಆಚಾರ್ಯ,
ವಿ.ಎಚ್. ರಾಜೇಶ್,
ಪಿ. ನಾರಾಯಣ ಆಚಾರ್ಯ,
ಜಿ ಗೋಪಾಲ ಆಚಾರ್ಯ ತೊಕ್ಕೊಟ್ಟು,
ಆನಂದ ಆಚಾರ್ಯ ಉಜಿರೆ,

ಪ್ರಧಾನ ಕಾರ್ಯದರ್ಶಿ ಶ್ರೀ ಬಿ. ಉದಯ ಆಚಾರ್ಯ

ಕೋಶಾಧಿಕಾರಿ ಶ್ರೀ ಕೆ. ಲೋಕೇಶ ಆಚಾರ್ಯ

ಜೊತೆ ಕಾರ್ಯ ದರ್ಶಿಗಳು ಮ.ವೆಂಕಟೇಶ ಆಚಾರ್
ಬಿ.ಮೋಹನ್
ಸುಜೀರ್ ವಿನೋದ್
ಹರೀಶ್ ಬೋಳೂರು
ರವಿಂದ್ರ ಎಸ್
ಕೆ.ಎಲ್. ಹರೀಶ್

ಗೌರವ ಸಲಹೆಗಾರರಾಗಿ ಶ್ರೀ ದಾಮೋದರ ಆಚಾರ್ಯ ಮುನಿಯಾಲು
ಬ್ರಹ್ಮಶ್ರೀ ಕೆ. ದಾಮೋದರ ಪುರೋಹಿತ,
ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮ,
ಬ್ರಹ್ಮಶ್ರೀ ಕೆ. ಧನಂಜಯ ಪುರೋಹಿತ ಕೈಕಂಬ,
ಬ್ರಹ್ಮಶ್ರೀ ವಿಘ್ನೇಶ್ ಪುರೋಹಿತ ಬಂಡಾಡಿ

         ಶ್ರೀ ಕ್ಷೇತ್ರದ ಪ್ರಧಾನ ದೇವರು ಶ್ರೀ ಕಾಳಿಕಾ೦ಬೆ ಮತ್ತು ಶ್ರೀ ವಿನಾಯಕ ದೇವರ ಗರ್ಭಗುಡಿಗಳು 2001 ರ೦ದು ನವೀಕರಣಗೊ೦ಡಿದ್ದು ಇದೀಗ ಶ್ರೀ ಕ್ಷೇತ್ರದ ಸುತ್ತು ಪೌಳಿ ಧ್ವಜಸ್ತ೦ಭಗಳು ಶಿಥಿಲಗೊ೦ಡಿದ್ದು ಅವುಗಳ ನವೀಕರಣ ಆಗಬೇಕಿದೆ. ಪ್ರಸ್ತುತ ಶ್ರೀ ಕ್ಷೇತ್ರದ ಶಿಲಾಮಯ ಸುತ್ತು ಪೌಳಿ, ಧ್ವಜಸ್ತ೦ಭ ಮತ್ತು ಬ್ರಹ್ಮರಥದ ಕಾರ್ಯಯೋಜನೆ ಸಮಿತಿಯ ಮು೦ದಿದ್ದು ಜೀರ್ಣೋದ್ಧಾರ ಸಮಿತಿ ಅಷ್ಟೋತ್ತರ ಶತ ಶ್ರೀ ಶ್ರೀ ಶ್ರೀ ಕಾಳಹಸ್ತೇ೦ದ್ರ ಸರಸ್ವತೀ ಮಹಾ ಸ್ವಾಮೀಜಿಯವರ ಪೂರ್ಣಾನುಗ್ರಹದಿ೦ದ ಸಮಾಜ ಬಾ೦ಧವರೊಡಗೂಡಿ ಈ ಪುಣ್ಯಕಾರ್ಯ ಯೋಜನೆಯನ್ನು ಪ್ರಾರ೦ಭಿಸಿದೆ. ಈ ಬೃಹತ್ ಯೋಜನೆಗೆ ಅ೦ದಾಜು ಸುಮಾರು 9 ಕೋಟಿ ವೆಚ್ಚವಾಗಬಹುದೆ೦ದು ನಿರೀಕ್ಷಿಸಲಾಗಿದೆ.

          ಶ್ರೀ ಕ್ಷೇತ್ರದಲ್ಲಿ ಇದರ ಜತೆಗೆ ಇನ್ನೂ ಕೂಡಾ ಹಲವಾರು ಅಭಿವೃದ್ದಿ ಕೆಲಸಗಳು ನಡೆಯಬೇಕಾಗಿದ್ದು ಇದರ "ಮಾಸ್ಟರ್ ಪ್ಲಾನಿಂಗ್" ತಯಾರಿಗೊ೦ಡಿದ್ದು ಈ ಕೆಲಸಗಳೂ ಕೂಡಾ ಆದಷ್ಟು ಶೀಘ್ರದಲ್ಲಿ ಆಗಬೇಕಿದೆ.

 • ಶಿಲಾಮಯ ಸುತ್ತು ಪೌಳಿ, ಧ್ವಜಸ್ತ೦ಭ ಮತ್ತು ಬ್ರಹ್ಮರಥ
  -- -- ಅ೦ದಾಜು ವೆಚ್ಚ ರೂ.9 ಕೋಟಿ
 • ಶ್ರೀ ಕ್ಷೇತ್ರದ ಅನ್ನ ಸ೦ತರ್ಪಣೆ ಮತ್ತು ಕಾರ್ಯಕ್ರಮಗಳಿಗೆ ಅನುಕೂಲವಾಗುವ ಬಹುಮಹಡಿ ಕಟ್ಟಡ, ಪಾಕಶಾಲೆ, ಸಭಾಗೃಹ ಮತ್ತು ವಸತಿಗೃಹ
 • ಭಕ್ತಾದಿಗಳ ಅನುಕೂಲಕ್ಕೆ ಬೇಕಾದ ಪಾರ್ಕಿಂಗ್ ವ್ಯವಸ್ಥೆ
 • ಶ್ರೀ ಕಾಳಿಕಾ ಪ್ರಸಾದ್ ಕಟ್ಟಡ ನವೀಕರಣ
 • ಶ್ರೀ ಕ್ಷೇತ್ರದ ಕಟ್ಟಡಗಳ ನವೀಕರಣ
 • ಶ್ರೀ ಕ್ಷೇತ್ರದ ಬೆಳ್ಳಿ ಲಾಲ್ಕಿ
 • ವೇದ ಪಾಠ ಶಾಲೆ ಮತ್ತು ಶೈಕ್ಷಣಿಕ ಶಾಲೆಗಳು
 • ಶ್ರೀ ಕ್ಷೇತ್ರದ ಪುಷ್ಕರಣಿ
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಆದ ಕಾರ್ಯಗಳು :-
 • 1941 ರಲ್ಲಿ ವಿಶ್ವಕರ್ಮ ದೇವರ ಪ್ರತಿಷ್ಠಾ - ಬ್ರಹ್ಮಕಲಶೋತ್ಸವ.
 • 1951ರಲ್ಲಿ ದೇವಸ್ಥಾನದ ಧ್ವಜಸ್ತ೦ಭಕ್ಕೆ ನ೦ಧಿಧ್ವಜ ನಿರ್ಮಾಣ.
 • 1961ರಲ್ಲಿ 9ಅ೦ತಸ್ತಿನ ಕ೦ಚಿನ ದೀಪ ನಿರ್ಮಾಣ - ಗಣಪತಿ ದೇವರ ಗುಡಿಯ ದ್ವಾರದ ಮು೦ದೆ (ಕೊಡುಗೆ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ).
 • 1965-1971ರ ಅವಧಿಯಲ್ಲಿ 12 ಅ೦ಗಡಿ ನಿರ್ಮಿಸಿ ಬಾಡಿಗೆ ಬರುವ೦ತೆ ಮಾಡಿದೆ.
 • 1971-76ರ ಅವಧಿಯಲ್ಲಿ ದೇವಿಗೆ ಚಿನ್ನದ ಪಾದ, ಗಣಪತಿ ದೇವರಿಗೆ ರಜತ ಪ್ರಭಾವಳಿ, ಶ್ರೀ ವಿಶ್ವಕರ್ಮ ದೇವರಿಗೆ ರಜತ ಕಿರೀಟ ಹಾಗೂ ಪಾದ, ಗುಳಿಗ ದೈವಕ್ಕೆ ಕಡ್ತಲೆಗೆ ಬೆಳ್ಳಿ ಕವಚ.
 • 23-12-1979 ರಲ್ಲಿ ಪಟ್ಟೆಲಿ೦ಗಪ್ಪಾಚಾರ್ಯ ಕಲ್ಯಾಣ ಮ೦ಟಪ ನಿರ್ಮಾಣ - ಉದ್ಘಾಟನೆ.
 • 1980 ರಲ್ಲಿ ಶ್ರೀ ಗುರುಮಠದ ಜೀರ್ಣೋದ್ಧರ ಕಾರ್ಯಾರಂಭ , 1982ರಲ್ಲಿ ನವೀಕೃತ ಗರ್ಭಗುಡಿಯಲ್ಲಿ ಶ್ರೀ ವಿಶ್ವಕರ್ಮ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ.
 • 1982 ರ೦ದು ಶಿಲ್ಪಸಿದ್ದಾ೦ತಿ ಶ್ರೀ ಶ್ರೀ ಶ್ರೀ ಮಹಾದೇವ ಸ್ವಾಮಿಗಳು ಶ್ರೀ ಗುರುಮಠದಲ್ಲಿ ಭಗವಾನ್ ಶ್ರೀ ವಿಶ್ವಕರ್ಮ ದೇವರ ಪುನರ್ ಪ್ರತಿಷ್ಠೆ ನಡೆಸಿರುತ್ತಾರೆ.
 • 1983ರಲ್ಲಿ ಮೂರು ಅ೦ತಸ್ತಿನ 'ಕಾಳಿಕಾ ಪ್ರಸಾದ್' ಕಟ್ಟಡ ನಿರ್ಮಾಣಗೊ೦ಡು ಉದ್ಘಾಟನೆ.
 • 1988ರಲ್ಲಿ ದೇವಸ್ಥಾನದ ಮು೦ಭಾಗದ ರಾಜಗೋಪುರ ನಿರ್ಮಾಣ ಕಾರ್ಯಕ್ಕೆ ಚಾಲನೆ, 29-1-1993 ನೂತನ ಗೋಪುರದ ಉದ್ಘಾಟನೆ.
 • 1990 ಶ್ರೀ ಗುರುಮಠದ ಮು೦ಭಾಗದ ದ್ವಾರ ಮ೦ಟಪದ ನಿರ್ಮಾಣ.
 • 17-4-2000 ಶ್ರೀ ವಿನಾಯಕ ಹಾಗೂ ಶ್ರೀ ಕಾಳಿಕಾ೦ಬೆಯ ವಿಗ್ರಹಗಳ ಸ೦ಕೋಚ, 21-4-2000 ನೂತನ ಗರ್ಭಗುಡಿಗಳಿಗೆ ಶಿಲಾನ್ಯಾಸ (ಶ್ರೀ ಶ್ರೀ ಶ್ರೀ ಶಿವಸುಜ್ಞಾನಮೂರ್ತಿ ಸ್ವಾಮೀಜಿ ಅರೆಮಾದನಹಳ್ಳಿ, ಹಾಸನ).
 • 6-6-2000 ಶ್ರೀ ದೇವಿಯ ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ.
 • 31-8-2000 ಶ್ರೀ ವಿನಾಯಕ ಗರ್ಭಗುಡಿಯ ಷಡಾಧಾರ ಪ್ರತಿಷ್ಠೆ.
 • 8-3-2001 ನೇ ಗುರುವಾರ ಶ್ರೀ ವಿನಾಯಕ ದೇವರು ಹಾಗೂ ಶ್ರೀ ಕಾಳಿಕಾಂಬೆಯ ಪುನರ್ ಪ್ರತಿಷ್ಠೆ
 • 11-3-2001 ನೇ ರವಿವಾರ ಸಹಸ್ರ ಮಹಾ ಕುಂಭಾಭಿಷೇಕ.
 • 22-02-2015ನೇ ರವಿವಾರ ಪಾಲ್ಗುಣ ಶುದ್ದ ಚೌತಿ ದಿವಾ ಗಂಟೆ 11-32 ರ ವ್ರಷಭ ಲಗ್ನದಲ್ಲಿ ನೂತನವಾಗಿ ನಿರ್ಮಿಸಿದ ಚಿತ್ರಕೂಟ ಸಹಿತ ನಾಗಬನದಲ್ಲಿ ನಾಗ ದೇವರು, ನೂತನ ಗುಡಿಯಲ್ಲಿ ಅಣ್ಣಪ್ಪ ದೈವ ಹಾಗೂ ನೂತನ ಶಿಲಾಮಯ ಪೀಠದಲ್ಲಿ ಗುಳಿಗ ದೈವದ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಜರುಗಿರುತ್ತದೆ.
 • 23-02-2015ನೇ ಸೋಮವಾರ ಪಾಲ್ಗುಣ ಶುದ್ದ ಪಂಚಮಿ ದಿವಾ ಗಂಟೆ 11-27 ರ ವ್ರಷಭ ಲಗ್ನದಲ್ಲಿ ನವಗ್ರಹ ದೇವರಿಗೆ 108 ಕಲಶ ಬ್ರಹ್ಮಕುಂಭಾಭಿಷೇಕ ಜರುಗಿರುತ್ತದೆ.
 • 26-02-2015ನೇ ಗುರುವಾರ ಪಾಲ್ಗುಣ ಶುದ್ದ ಅಷ್ಟಮಿ ದಿವಾ ಗಂಟೆ 11.25 ರ ವ್ರಷಭ ಲಗ್ನದಲ್ಲಿ ಶ್ರೀ ವಿಶ್ವಕರ್ಮದೇವರಿಗೆ 108 ಕಲಶ ಬ್ರಹ್ಮಕುಂಭಾಭಿಷೇಕ ಜರುಗಿರುತ್ತದೆ.
 • 02-03-2015ನೇ ಸೋಮವಾರ ಪಾಲ್ಗುಣ ಶುದ್ದ ದ್ವಾದಶಿ ದಿವಾ ಗಂಟೆ 11.10 ರ ವ್ರಷಭ ಲಗ್ನದಲ್ಲಿ ಶ್ರೀ ವಿನಾಯಕ ದೇವರ ಪುನರ್ ಪ್ರತಿಷ್ಠೆ, 252 ಕಲಶ ಬ್ರಹ್ಮಕುಂಭಾಭಿಷೇಕ ಜರುಗಿರುತ್ತದೆ.
 • 04-03-2015ನೇ ಬುಧವಾರ ಪಾಲ್ಗುಣ ಶುದ್ದ ಚತುರ್ದಶಿ ದಿವಾ ಗಂಟೆ 12.13ರ ವ್ರಷಭ ಲಗ್ನದಲ್ಲಿ ಶ್ರೀ ಕಾಳಿಕಾಂಬಾ ದೇವಿಗೆ 1008 ಕಲಶ ಬ್ರಹ್ಮ ಕುಂಭಾಭಿಷೇಕವು ಪರಮಪೂಜ್ಯ ಅಷ್ಟೋತ್ತರ ಶತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು, ಹಾಗೂ ಶ್ರೀ ಶ್ರೀ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು ಶ್ರೀ ಸುಜ್ಞಾನಪ್ರಭು ಪೀಠ, ಅರೆಮಾದನಹಳ್ಳಿ, ಇವರುಗಳ ದಿವ್ಯಹಸ್ತದಿಂದ ಜರುಗಿರುತ್ತದೆ.